ಶಬರಿಮಲೆ ಸ್ವಾಮಿ ಅಯ್ಯಪ್ಪ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಸುಬ್ರಹ್ಮಣ್ಯಂ ಕುಮಾರ್ ಮತ್ತು ವಿ. ಸ್ವಾಮಿನಾಥನ್ ಅವರು ನಿರ್ಮಿಸಿದ್ದು ರೇಣುಕಾಶರ್ಮ ನಿರ್ದೇಶಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ಶ್ರೀನಿವಾಸಮೂರ್ತಿ, ಗೀತಾ , ಮಾಸ್ಟರ್ ಸಂಜಯ್ ಇದ್ದಾರೆ. ಈ ಚಿತ್ರದ ಸಂಗೀತವನ್ನು ಕೆ.ವಿ. ಮಹದೇವನ್ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂನಲ್ಲಿ ಇದೇ ಹೆಸರಿನಲ್ಲಿ, ತಮಿಳಿನಲ್ಲಿ ಮಣಿಕಂಡನ್ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. == ಪಾತ್ರವರ್ಗ == ಮಣಿಕಂಠ ಶ್ರೀ ಸ್ವಾಮಿ ಅಯ್ಯಪ್ಪನಾಗಿ ಮಾಸ್ಟರ್ ಸಂಜಯ್ ಶ್ರೀನಿವಾಸಮೂರ್ತಿ ಪಾಂಡ್ಯರಾಜನಾಗಿ ಗೀತಾ ಪಾಂಡುರಾಜನ ಮಡದಿಯಾಗಿ ಶ್ರೀಲತಾ == ಚಿತ್ರಸಂಗೀತ == ಈ ಚಿತ್ರದ ಸಂಗೀತವನ್ನು ಕೆ.ವಿ ಮಹದೇವನ್ ಸಂಯೋಜಿಸಿದ್ದಾರೆ. ಗೀತೆಗಳನ್ನು ವಿಜಯ ನಾರಸಿಂಹ ಮತ್ತು ಚಿ ಉದಯಶಂಕರ್ ರಚಿಸಿದ್ದಾರೆ.